ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಆಸ್ತಿ ಎಷ್ಟು ಗೊತ್ತಾ?

 



ಕಾಪು: ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ ಅವರು 27,56,02,655 ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

ವಿವಿಧ ಬ್ಯಾಂಕ್‌ ಖಾತೆಗಳು, ಚಿನ್ನಾಭರಣ, ವಿವಿಧ ವಿಮಾ ಕಂಪೆನಿಗಳಲ್ಲಿ ತೊಡಗಿಸಿರುವ ಮೊತ್ತ, 2 ಸ್ವಂತ ವಾಹನಗಳು ಹಾಗೂ ಕೈಯಲ್ಲಿರುವ ನಗದು ಸೇರಿ 10,12,02,654.66 ಚರಾಸ್ತಿ ಹೊಂದಿದ್ದಾರೆ. ಕಳತ್ತೂರು, ಮುಂಬಯಿ, ಬಳ್ಳಾರಿ ಮತ್ತಿತರೆಡೆ 17,44,00,000 ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ. ಪತ್ನಿ ವಿಜಯಾ ಶೆಟ್ಟಿ ಹೆಸರಿನಲ್ಲಿ ನಗದು, ವಿವಿಧ ಬ್ಯಾಂಕ್‌ ಖಾತೆಗಳಲ್ಲಿನ ಉಳಿತಾಯ, ಚಿನ್ನಾಭರಣ ಸೇರಿ 1,54,92,572.24 ರೂ. ಮೌಲ್ಯದ ಚರಾಸ್ತಿ ಇದೆ.

ಮಗ ಸೌರಭ್‌ ಎಸ್‌. ಶೆಟ್ಟಿ ಹೆಸರಿನಲ್ಲಿ 2,18,82,997.53 ರೂ. ಮೌಲ್ಯದ ಚರಾಸ್ತಿ ಹಾಗೂ 2 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ 27 ಗ್ರಾಂ ಚಿನ್ನ ಹೊಂದಿದ್ದರೆ ಅವರಿಗಿಂತ 15 ಗ್ರಾಂ ಹೆಚ್ಚಿಗೆ ಅಂದರೆ 42 ಗ್ರಾಂ ಚಿನ್ನಾಭರಣವನ್ನು ಗುರ್ಮೆ ಸುರೇಶ್‌ ಶೆಟ್ಟಿ ಹೊಂದಿದ್ದಾರೆ.


Comments