ದಕ್ಷಿಣ ಕನ್ನಡ ಜಿಲ್ಲೆಯ ದಿಗಂತ್ ನಾಪತ್ತೆ ಪ್ರಕರಣ: ಉಡುಪಿಯ ಡಿಮಾರ್ಟ್ನಲ್ಲಿ ಬಾಲಕ ಪತ್ತೆ
ದ. ಕ: ದಕ್ಷಿಣ ಕನ್ನಡ ಜಿಲ್ಲೆಯ ದಿಗಂತ್ ನಾಪತ್ತೆ ಪ್ರಕರಣದ ಬಾಲಕ ಪತ್ತೆಯಾಗಿದ್ದು ಉಡುಪಿಯ ಡಿಮಾರ್ಟ್ ನಲ್ಲಿದ್ದ ಎನ್ನಲಾಗಿದೆ.
ಉಡುಪಿ ನಗರದ ಡಿಮಾರ್ಟ್ ನಲ್ಲಿ ದಿಗಂತ್ ಸಂಪೂರ್ಣ ಕೊಳಕುಮಯವಾಗಿದ್ದ ಬಟ್ಟೆಬರೆ ಧರಿಸಿದ್ದ. ತನ್ನ ಬ್ಯಾಗ್ ಗೆ ಡಿಮಾರ್ಟ್ ನಲ್ಲಿ ಬಟ್ಟೆಗಳನ್ನು ತುಂಬಿಸಿಕೊಂಡಿದ್ದ ದಿಗಂತ್ ಚಲನವಲನ ಕಂಡು ಸಂಶಯಗೊಂಡ ಸಿಬ್ಬಂದಿ ವಿಚಾರಣೆ ನಡೆಸಿದಾಗ ತಬ್ಬಿಬ್ಬಾಗಿ ಉತ್ತರಿಸಿದ್ದ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ದಿಗಂತ್ ಫೋಟೋ ಸಿಬ್ಬಂದಿಗಳು ನೋಡಿದ್ದರು.ಕೂಡಲೇ ಈತ ಕಣ್ಮರೆಯಾಗಿರುವ ಯುವಕ ಎಂದು ಸಂಶಯಗೊಂಡ ಡಿ ಮಾರ್ಟ್ ಸಿಬ್ಬಂದಿ ನಂತರ ವಿಚಾರಿಸಿದಾಗ ತನ್ನ ಪರಿಚಯ ಹೇಳಿಕೊಂಡು ತಾನೇ ಆ ಯುವಕ ಎಂದು ಒಪ್ಪಿಕೊಂಡಿದ್ದಾನೆ
ನಂತರ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಫೋನ್ ನಲ್ಲಿ ಕುಟುಂಬದ ಜೊತೆ ಮಾತುಕತೆ ನಡೆಸಿ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
Comments