ಅಣ್ಣಾ ಮಲೈ ಬಂದ ಹೆಲಿಕಾಪ್ಟರ್'ನಲ್ಲಿ ನಿಜವಾಗಿಯೂ ಕೋಟಿ ಕೋಟಿ ಹಣ ಇತ್ತಾ ? - ಇಲ್ಲಿದೆ ಪಕ್ಕಾ ಡಿಟೈಲ್ಸ್
ಉಡುಪಿ: ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಂದು ಸಂಚಲನ ಮೂಡಿಸುವ ಹೇಳಿಕೆ ನೀಡಿದ್ರು, ಅಣ್ಣಾ ಮಲೈ ಆಗಮಿಸಿದ ಹೆಲಿಕಾಪ್ಟರ್ ನಲ್ಲಿ ಕಂತೆ ಹಣ ಇದೆ. ಅದಕ್ಕಾಗಿ ಸಮಯಕ್ಕಿಂತ ಮುಂಚಿತವಾಗಿ ಲ್ಯಾಂಡ್ ಆಗಿದೆ ಎಂಬ ಆರೋಪ ಮಾಡಿದ್ದರು. ಚುನಾವಣಾಧಿಕಾರಿಗಳಿಗೂ ಮಾಹಿತಿ ನೀಡಿರುವ ಕುರಿತು ಉಲ್ಲೇಖಿಸಿದ್ದರು.
ನಂತರ ಅಣ್ಣಾಮಲೈ ಸ್ವತಃ ಸ್ಪಷ್ಟನೆ ನೀಡುತ್ತಾ ಸೋಲುವ ಭೀತಿಯಿಂದ ಅಸಹಾಯಕತೆಯ ಹೇಳಿಕೆ ವಿನಯ ಕುಮಾರ್ ಸೊರಕೆ ಅವರದ್ದು ಎಂದು ಹೇಳಿದ್ದರು.
ಹಾಗಾದರೆ ಹೆಲಿಕಾಪ್ಟರ್ ನಲ್ಲಿ ನಿಜವಾಗಿಯೂ ಕಂತೆ ಕಂತೆ ಹಣ ಇತ್ತಾ ಎಂಬ ಕುತೂಹಲ ಉಡುಪಿ ಜನತೆಯಲ್ಲಿ ಹಾಗೆ ಉಳಿದಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಚುನಾವಣಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ.
ಕರ್ನಾಟಕ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ
ತಮಿಳುನಾಡು ಇದರ ಅಧ್ಯಕ್ಷರಾದ ಕೆ.ಅಣ್ಣಾಮಲ್ಯ ಇವರು ದಿನಾಂಕ: 17-04-2023 ರಂದು ಉಡುಪಿ
ಜಿಲ್ಲೆಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ್ದು, ಈ ಸಂದರ್ಭದಲ್ಲಿ ಸದ್ರಿ ಹಲಿಕಾಪ್ಟರ್ ಆದಿಉಡುಪಿಯ
ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗಿರುತ್ತದೆ.
ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ MCC ನೋಡೆಲ್ ಅಧಿಕಾರಿ ಹಾಗೂ FST ತಂಡಗಳು ಉಪಸ್ಥಿತರಿದ್ದು, ಹೆಲಿಕಾಪ್ಟರ್‌ನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ
MCC ಉಲ್ಲಂಘನೆಯ ಯಾವುದೇ ಅಂಶಗಳು ಕಂಡುಬಂದಿರುವುದಿಲ್ಲ ಎಂದು ಹೇಳಿದ್ದಾರೆ. ಇದರರ್ಥ ಚುನಾವಣಾ ಅಧಿಕಾರಿಗಳಿಗಂತೂ ಅಲ್ಲಿ ನಯಾ ಪೈಸೆ ಸಿಕ್ಕಿಲ್ಲ. ಆದರೆ ವಿನಯ ಕುಮಾರ್ ಸೊರಕೆ ಮಾಡಿರುವ ಆರೋಪ ಮಾತ್ರ ಅನುಮಾನದ ಹುತ್ತ ಬೆಳೆಸುವಂತೆ ಮಾಡಿದೆ.
Comments