ರಘುಪತಿ ಭಟ್ರು, ಪ್ರಮೋದ್ ಅಷ್ಟು ಸ್ಟ್ರಾಂಗ್ ಅಭ್ಯರ್ಥಿ ಯಶ್ಫಾಲ್ ಅಲ್ಲ ಮಾರ್ರೆ ಫೈಟ್ ಉಂಟು; ಆದ್ರೆ…..!
ಉಡುಪಿ ಕ್ಷೇತ್ರ (Udupi Constituency) ಅಭ್ಯರ್ಥಿಗಳ ಆಯ್ಕೆಗೆ ಎಷ್ಟು ಕುತೂಹಲ ಇಟ್ಟುಕೊಂಡು ಮುಂದೆ ಸಾಗಿತ್ತೋ ಇದೀಗ ಅಭ್ಯರ್ಥಿ ಘೋಷಣೆಯ ನಂತರ ಕೂಡ ಬಹಳಷ್ಟು ಕುತೂಹಲವನ್ನು ಕ್ಷೇತ್ರ ಇಟ್ಟುಕೊಂಡಿದೆ.
ಉಡುಪಿ ಕ್ಷೇತ್ರದಲ್ಲಿ ಎರಡು ಪಕ್ಷದಲ್ಲಿ ಹೊಸ ಮುಖದ ಪರಿಚಯ ಮಾಡಲಾಗಿದೆ. ಬಿಜೆಪಿಯಲ್ಲಿ ಪ್ರಮೋದ್ ಅಥವಾ ರಘುಪತಿ ಭಟ್ ಅಭ್ಯರ್ಥಿಯಾದರೆ ಕಣ್ಣು ಮುಚ್ಚಿ ಗೆಲ್ಲುತ್ತಾರೆ ಎಂಬ ಮಾತಿತ್ತು. ಆದರೆ ಹೈಕಮಾಂಡ್ ಈ ಬಾರಿ ಹೊಸ ಮುಖ ಕಣಕ್ಕಿಳಿಸಿದೆ. ಅದು ಯಶ್ಫಾಲ್ ಸುವರ್ಣ. ವಿವಾದಿತ ನಾಯಕ. ಇವರ ಹೇಳಿಕೆಗಳು ಹಲವರ ಕಣ್ಣು ಕೆಂಪಾಗಿಸಿತ್ತು. ಕೆಲವರಂತೂ ಇವರ ಹೇಳಿಕೆಗೆ ಇದೆಲ್ಲ ಬೇಕಾ ಎಂದು ಪ್ರಶ್ನಿಸಿದ್ದು ಇದೆ. ಹಲವು ಸಂದರ್ಭದಲ್ಲಿ ಆಧಾರ ರಹಿತ ಹೇಳಿಕೆಯಿಂದಲೇ ಸುದ್ದಿಯಲ್ಲಿದ್ದವರು. ಇನ್ನು ನೋಡುವುದಾದರೆ ಯಾವುದೇ ವಿವಾದದ ಸಂದರ್ಭದಲ್ಲಿ ರಘುಪತಿ ಭಟ್ ನಿರ್ವಹಿಸಿದ ರೀತಿಗೂ ಇವರ ರೀತಿಗೂ ಬಹಳಷ್ಟು ವಿರೋಧಾಭಾಸವಿತ್ತು. ಹಾಗಾಗಿ ಸಹಜವಾಗಿ ಉಡುಪಿ ಕ್ಷೇತ್ರದಲ್ಲಿ ಯಶ್ಫಾಲ್ ಸುವರ್ಣರಿಗೆ ರಘುಪತಿ ಭಟ್ ಅಥವಾ ಪ್ರಮೋದ್ ಮಧ್ವರಾಜ್ ಅಷ್ಟು ಜನರು ಸ್ವೀಕರಾ ಮಾಡಲಿದ್ದಾರೆಯೇ? ಎಂಬುವುದನ್ನು ಕಾದು ನೋಡಬೇಕಾಗಿದೆ.
ಇನ್ನು ಕಾಂಗ್ರೆಸ್'ಗೂ ಉಡುಪಿಯಲ್ಲಿ ಫೈಟ್ ಮಾಡಲು ಅವಕಾಶ ಎಂದೇ ಹೇಳಬಹುದು. ಒಂದು ವೇಳೆ ಇಲ್ಲಿ ರಘುಪತಿ ಭಟ್ ಅಥವಾ ಪ್ರಮೋದ್ ಸ್ಪರ್ಧಿಸುತ್ತಿದ್ದರೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನೂರು ಶೇಕಡಾ ಎಂಬುವಂತಿತ್ತು. ಆದರೆ ಅಭ್ಯರ್ಥಿ ಬದಲಾವಣೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ಹೊಸ ಮುಖವಾದರೂ ತೀವ್ರ ಪೈಪೋಟಿ ನೀಡಲಿದ್ದಾರೆ ಎಂಬುವುದು ಜನ ಮಾತು.
ಇನ್ನು ಅಳೆದು ತೂಗಿ ಜಾತಿ ಲೆಕ್ಕಚಾರ ಮಾಡಿದ್ರೂ ಬಿಜೆಪಿಗೆ ಮೇಲ್ನೋಟಕ್ಕೆ ಪರವಾಗಿ ಕಂಡರೂ ಈ ಬಾರಿ ಒಳ ಪೆಟ್ಟು ಸ್ಟ್ರಾಂಗೇ ಇದೆ. ಒಂದು ಕಡೆ ಇಬ್ಬರೂ ಮೋಗವಿರ ಸಮುದಾಯದ ಅಭ್ಯರ್ಥಿಗಳು ಸುಮಾರು 60000 ಸಾವಿರ ಮತದಲ್ಲಿ 70-30 ಆಟ ನಡೆಯಲಿದೆ. ಇನ್ನೊಂದು ಕಡೆ ಬಿಲ್ಲವ ಮತ್ತು ಬಂಟ ಸಮುದಾಯದ ಮತಗಳು ಲಕ್ಷದಷ್ಟಿದ್ದೂ ಈಗಾಗಲೇ ಚರ್ಚಿತ ನಾನಾ ಕಾರಣಕ್ಕೆ ಬಿಜೆಪಿಗೆ ಕಳೆದ ಬಾರಿಯಷ್ಟೂ ಸಿಗದಿದ್ದರೆ ಈ ಬಾರಿ ಕಷ್ಟವಿದೆ. ಪ್ರಮೋದ್ ಮಧ್ವರಾಜ್ ಸೋತಿದ್ದು 12 ಸಾವಿರ ಮತ ಅಂತರದಿಂದ ಈ ಬಾರಿ ಹಲವು ಫ್ಯಾಕ್ಟರ್'ಗಳು ಕೆಲಸ ಮಾಡುತ್ತಿರುವುದರಿಂದ ಬಿಜೆಪಿ ಮೈಮರೆತು ಯಾಮಾರಿದರೆ ಕಾಂಗ್ರೆಸ್ ಇಲ್ಲಿ ಸೈಲೆಂಟಾಗಿ ನಗು ಬೀರಲಿದೆ. ಎಸ್ಸಿ,ಎಸ್ಟಿ ಅಲ್ಪ ಸಂಖ್ಯಾತರ ಮತ ಸೆಳೆಯುವ ತಾಕತ್ತು ಬಿಜೆಪಿಯಲ್ಲಿ ಇದ್ದದ್ದು ರಘುಪತಿ ಭಟ್ರಿಗೆ ಮತ್ತು ಪ್ರಮೋದ್ ಮಧ್ಚರಾಜ್'ಗೆ ಆದರೆ ಯಶ್ಫಾಲ್ ಸುವರ್ಣ ಈಗಾಗಲೇ ಅಲ್ಪಸಂಖ್ಯಾತರ ಕುರಿತಾದ ವಿವಿಧ ಹೇಳಿಕೆಗಳಿಂದ ಅವರ ವಿರೋಧ ಎದುರಿಸುತ್ತಿದ್ದು ಅಲ್ಪ ಮತ ಗಳಿಸಲೂ ಕಷ್ಟವಾಗಬಹುದು.
ರಾಜ್ಯದಲ್ಲಿ ವಿರೋಧ ಪಕ್ಷಗಳು ಭ್ರಷ್ಟಾಚಾರ, ದುಬಾರಿ ಬೆಲೆ ಸೇರಿದಂತೆ ಹಲವು ವಿಧದ ಸಮಸ್ಯೆಗಳನ್ನು ಜನರಿಗೆ ತಲುಪಿಸುವಲ್ಲಿ ಸಫಲವಾಗಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಉಡುಪಿ ಕ್ಷೇತ್ರದಲ್ಲೂ ಸೈಲೆಂಟ್ ವೋಟರ್ ಸಹಜವಾಗಿ ಇಂತಹ ಸಮಸ್ಯೆಗಳಿಂದ ಬೆಸೆತ್ತಿರುವುದು ಗ್ರೌಂಡ್ ರಿಪೋರ್ಟ್. ಈ ಎಲ್ಲ ಬೆಳವಣಿಗೆಯ ನಡುವೆ ಸಮುದಾಯವಾರು ಮತಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಿಭಜನೆಯದಲ್ಲಿ ಅಲ್ಪಸಂಖ್ಯಾತ,ದಲಿತರು ಮತ್ತು ಬ್ರಾಹ್ಮಣರ ಮತಗಳು ನಿರ್ಣಯಕವಾಗಲಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಅಂದುಕೊಂಡ ಹಾಗೆ ಸುಲಭವಾಗಿ ಗೆಲ್ಲುತ್ತೇವೆ ಎಂಬ ಪರಿಸ್ಥಿತಿ ಈಗಿಲ್ಲ.
ಹಾಗಂತ ಕಾಂಗ್ರೆಸ್ ಸುಲಭವಾಗಿ ಈ ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂಬ ವಾದವೂ ಅಲ್ಲ. ಪ್ರಸಾದ್ ಕಾಂಚನ್ ಈ ಕ್ಷೇತ್ರದಲ್ಲಿ ತೀರಾ ಹೊಸ ಮುಖ. ಬಹಳಷ್ಟು ಜನರಿಗೆ ಪರಿಚಯವೇ ಇಲ್ಲ. ಇಂತಹ ಸಂದರ್ಭದಲ್ಲಿ ಜನ ಮತ ಹಾಕುವುದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ. ಹಾಗಾಗಿ ಸ್ಥಳೀಯ ನಾಯಕತ್ವ ಒಗ್ಗಟ್ಟಾಗಿ, ಸಕ್ರಿಯವಾಗಿ ಫೀಲ್ಡಿಗೆ ಇಳಿದರೆ ಒಂದು ಫೈಟು ನೋಡಲಿಕ್ಕೂಂಟು. ಪ್ರಸಾದ್ ಅವರನ್ನು ಯಶ್ಫಾಲ್'ಗೆ ಕಂಪೈರ್ ಮಾಡಿದರೆ ಯಶ್ಫಾಲ್ ಸಂಘಪರಿವಾರದ ಸಕ್ರಿಯ ಮುಖಂಡ. ಮಹಾಲಕ್ಷ್ಮಿ ಸೊಸೈಟಿಯಲ್ಲಿ ಗುರುತಿಸಿಕೊಂಡವರು ಅವರನ್ನು ಹೆಚ್ಚು ಜನ ಬಲ್ಲರು. ಆದರೆ ಅವರ ಕುರಿತಾದ ನಕರಾತ್ಮಕ ವಿಚಾರಗಳನ್ನು ಮರೆತು ಜನ ಅವರಿಗೆ ಮತ ಹಾಕಿದರೆ ಗೆಲುವು ಸ್ಪಷ್ಟ!
ನಿಮ್ಮ ಅಭಿಪ್ರಾಯವೇನು ಸ್ವಲ್ಪ ಕಮೆಂಟ್'ನಲ್ಲಿ ಹೇಳಿ ಬಿಡಿ ನೋಡೋಣ!



Comments