ಭಟ್ರ ಮೂಗಿಗೆ ಬಡಿದಿದೆ ಟಿಕೆಟ್‌ ತಪ್ಪುವ ಘಾಟು; ಹಾಗಾದರೆ ಅವರು ಯಾರನ್ನೂ ಬೆಂಬಲಿಸಬಹುದು ಗೊತ್ತಾ?



ಹೌದು ಈ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ರಘುಪತಿ ಭಟ್ರಿಗೆ ಟಿಕೆಟ್ ಸಿಗುವುದು ಅನುಮಾನ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವಾಗಲೇ ಅವರ ಮಾತಿನ ದಾಟಿಯಿಂದ ಅದು ಅರ್ಥವಾಗುತ್ತಿತ್ತು. ಹೈಕಮಾಂಡ್ ಪ್ರಯೋಗಕ್ಕೆ ಮುಂದಾದರೆ ಎಂಬ ಮಾತಿಗೆ ಸ್ಪಷ್ಟವಾದ ಉತ್ತರ ಅವರ ಬಳಿ ಇರಲಿಲ್ಲ. 


ಇನ್ನೂ ರಘುಪತಿ ಭಟ್ರು ಟಿಕೆಟ್ ತಪ್ಪಿದರೂ ತಾನು ಬೆಂಬಲಿಸುವ ಅಭ್ಯರ್ಥಿಗಾದರೂ ಟಿಕೆಟ್ ಕೊಡಿಯೆಂದು ಒತ್ತಡ ಹಾಕಿರುವ ಸಾಧ್ಯತೆಯೂ ಇದೆ. ಈಗಿನ ರಾಜಕೀಯ ವಲಯದ ಗುಸು ಗುಸು ಪ್ರಕಾರ ರಘುಪತಿ ಭಟ್ ತನಗೆ ಟಿಕೆಟ್ ತಪ್ಪಿದರೆ ಪ್ರಮೋದ್ ಮಧ್ವರಾಜ್'ಗೆ ಟಿಕೆಟ್ ಕೊಟ್ಟರೆ ಒಕೆ ಎನ್ನುವ ಹಂತದಲ್ಲಿದ್ದಾರೆ ಎಂಬ ಮಾತಿದೆ. ಕುಂದಾಪುರದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಚುನಾವಣಾ ನಿವೃತ್ತಿ ರಘುಪತಿ ಭಟ್ ಅವರ ರಾಜಕೀಯ ಜೀವನಕ್ಕೂ ತಿರುವು ನೀಡಿದ್ದು ಮಾತ್ರ ಸುಳ್ಳಲ್ಲ. ಕುಂದಾಪುರದಲ್ಲಿ ಕಿರಣ್ ಕೊಡ್ಗಿ ಟಿಕೆಟ್ ಪಡೆದರೆ ಉಡುಪಿಯಲ್ಲಿ ಮೊಗವಿರ ಸಮುದಾಯದ ಪ್ರಮೋದ್ ಮಧ್ವರಾಜ್ ಮತ್ತು ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಕಳದಲ್ಲಿ ಸುನೀಲ್ ಕುಮಾರ್'ಗೆ ಟಿಕೆಟ್ ಘೋಷಿಸಿ ಎಲ್ಲ ಜಾತಿ ಲೆಕ್ಕಚಾರವನ್ನು ಹೈಕಮಾಂಡ್ ಸಮೀಕರಿಸಲಿದೆ ಎಂಬುವುದು ವಾದ.


ಟಿಕೆಟ್ ಗಿಟ್ಟಿಸಿಕೊಳ್ಳಲು ಶತಾಯಗತಯ ಪ್ರಯತ್ನದಲ್ಲಿರುವ ರಘುಪತಿ ಭಟ್, ಕಾರ್ಯಕರ್ತರ ಒಲೈಕೆ, ಮತದಾರರ ಒಲೈಕೆಗೆ ಕಳೆದ ಎರಡು ತಿಂಗಳಿನಿಂದ ವೇಗ ನೀಡಿದ್ದರು. ಅಭಿವೃದ್ಧಿ ಕಾರ್ಯಗಳು ಕೂಡ ಕೊನೆಯ ಕ್ಷಣದಲ್ಲಿ ಅಲ್ಲಲ್ಲಿ ಗೋಚರಿಸುತ್ತಿತ್ತು. ಆದರೆ ಇವತ್ತಿನ ಸುದ್ದಿಗೋಷ್ಠಿಯಲ್ಲಿ ತಮಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಹೇಳಿದ ಹೇಳಿಕೆಯಲ್ಲೇ ವಿಶ್ವಾಸ ಇರಲಿಲ್ಲ ಎಂಬುವುದು ಮಾತ್ರ ಸತ್ಯ! 

ಇನ್ನು ಸಂಘಪರಿವಾರದಿಂದ ಬೆಳೆದು ಬಿಜೆಪಿಯಲ್ಲಿ ತೊಡಗಿಸಿಕೊಂಡಿರುವ ಹಲವು ವಿವಾದಗಳಲ್ಲಿ ಮೂಂಚುಣಿಯಲ್ಲಿರುವ ಯಶ್ಫಾಲ್'ಗೆ ಟಿಕೆಟ್ ಸಿಗಲಿದೆ ಎಂಬ ಕುರಿತು ಚರ್ಚೆ ನಡೆಯುತ್ತಿದ್ದರೂ ಪ್ರಸ್ತುತ ಮತದಾರರ ನಾಡಿ ಮಿಡಿತ ಅರ್ಥೈಸಿರುವ ಹೈಕಮಾಂಡ್ ಕ್ಷೇತ್ರದಲ್ಲಿರುವ ಸೈಲೆಂಟ್ ವೋಟರ್'ಗಳನ್ನು ಸೆಳೆಯುವ ನಿಟ್ಟಿನಲ್ಲಿ ಯಶ್ಫಾಲ್'ಗೆ ಈ ಬಾರಿಯಂತೂ ಟಿಕೆಟ್ ಅನುಮಾನವೇ ಸರಿ...! 

Comments