ಕುತೂಹಲ ಮೂಡಿಸಿರುವ ಉಡುಪಿ ಕ್ಷೇತ್ರದ ಜಾತಿ ಲೆಕ್ಕಚಾರ ಹೇಗಿದೆ?




ಉಡುಪಿ: ಉಡುಪಿ ಕ್ಷೇತ್ರ ರಾಜ್ಯದಲ್ಲೇ ಈ ಬಾರಿ ಅಭ್ಯರ್ಥಿಗಳ ಆಯ್ಕೆಯ ಕುರಿತು ಗಮನ ಸೆಳೆದಿದೆ. ಹಲವು ಗೊಂದಲಗಳ ನಡುವೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಪ್ರಸಾದ್ ಕಾಂಚನ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಣೆಯಾಗಿದೆ. ಬಿಜೆಪಿಯ ಅಭ್ಯರ್ಥಿ ಗೊಂದಲ ಮುಂದುವರಿದಿದೆ. ಇಂದು ಅದಕ್ಕೆ ತೆರೆ ಬೀಳುವ ಸಾಧ್ಯತೆಯೂ ಇದೆ.

       ಚಿತ್ರ: ಪ್ರಸಾದ್ ಕಾಂಚನ್

ಈತನ್ಮಧ್ಯೆ ಉಡುಪಿ ಕ್ಷೇತ್ರದ ಜಾತಿ ಲೆಕ್ಕಚಾರ ಕೂಡ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರ ಆಧಾರದ ಮೇಲೆಯೇ ಪಕ್ಷಗಳು ಇಲ್ಲಿ ಅಭ್ಯರ್ಥಿ ಘೋಷಣೆ ಮಾಡುವುದು ವಾಡಿಕೆ. ಆದರೆ ಇಲ್ಲಿ ಹಿಂದುತ್ವ ಕಾರ್ಡ್ ಕೂಡ ದೊಡ್ಡ ಪಾತ್ರ ವಹಿಸುತ್ತದೆ ಎಂಬುವುದೂ ಸುಳ್ಳಲ್ಲ. 

ಜಾತಿ ಲೆಕ್ಕಚಾರ ನೋಡುವುದಾದರೆ ಇದನ್ನು ಮೊಗವೀರರ ಪ್ರಾಬಲ್ಯದ ಕ್ಷೇತ್ರ ಎನ್ನಲಾಗುತ್ತಾದರೂ ವಾಸ್ತವದಲ್ಲಿ ಈ ಕ್ಷೇತ್ರದಲ್ಲಿ ಬಿಲ್ಲವರು ಮತ್ತು ಬಂಟರು ಕೂಡ ಸಮಾನ ಸಂಖ್ಯೆಯಲ್ಲಿರುವುದರಿಂದ ಅವರ ಮತಗಳು ಕೂಡ ನಿರ್ಣಾಯ. ಈ ಕ್ಷೇತ್ರದಲ್ಲಿ ಪ್ರಬಲ ಜಾತಿಗಳ ಮತಗಳು ವಿಭಜನೆಯಾದಲ್ಲಿ ಅಲ್ಪಸಂಖ್ಯಾತರ ಮತಗಳು ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ.

ಮತದಾರರು - ಜಾತಿವಾರು ಲೆಕ್ಕಾಚಾರ

ಬಂಟರು, ಬಿಲ್ಲವರು, ಮೊಗವೀರರು ಸುಮಾರು ತಲಾ
40,000 - 50000, ಬ್ರಾಹ್ಮಣರು, ಜಿಎಸ್‌ಬಿ ಸೇರಿ ಸುಮಾರು 33,000,ಕ್ರೈಸ್ತರು ಸುಮಾರು 9,000, ಮುಸ್ಲಿಮರು ಸುಮಾರು13,000, ಪರಿಶಿಷ್ಟ ಜಾತಿ ಸುಮಾರು 11,000, ಪರಿಶಿಷ್ಟ ಪಂಗಡ ಸುಮಾರು 10,000, ವಿಶ್ವಕರ್ಮರು, ನೇಕಾರರು ಸುಮಾರು ತಲಾ 6,000 ಮಂದಿ, ಇತರರು ಸುಮಾರು 20,000 ಇದ್ದಾರೆ.

ಒಟ್ಟು ಮತದಾರರು: 2,03,777
ಪುರುಷರು: 98,759
ಮಹಿಳೆಯರು:1,05,018

ಈ ಮೇಲಿನ ಜಾತಿ ಲೆಕ್ಕಚಾರದ ಸಮೀಕರಣ ಬೇಧಿಸಲು ಸಾಧ್ಯವಾದ ಪಕ್ಷ ಉಡುಪಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಇಳಿಸಲಿದೆ ಎಂಬುವುದು ಸದ್ಯದ ಲೆಕ್ಕಚಾರ.

Reference: Udyavani, deccan Herald,Times Of India

Comments