ಚುನಾವಣೆಯ ಹೊತ್ತಲ್ಲೆ ಮಂಗಳೂರಿನಲ್ಲಿ ಸದ್ದು ಮಾಡಿದ ಅನೈತಿಕ ಪೊಲೀಸ್'ಗಿರಿ

 


ಮಂಗಳೂರು;ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಚುನಾವಣೆ ಹೊತ್ತಲ್ಲೇ ಪುತ್ತೂರಿನಲ್ಲಿ ಅನೈತಿಕ ಪೊಲೀಸ್ ಗಿರಿ ನಡೆದಿದೆ. 

ಪುತ್ತೂರು ನಗರದ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಮಹಮ್ಮದ್ ಫಾರಿಸ್ (18) ಹಲ್ಲೆಗೊಳಗಾದ ವಿದ್ಯಾರ್ಥಿ.

ಈತ ತನ್ನ ಸಹಪಾಠಿ ವಿದ್ಯಾರ್ಥಿನಿಯ ಜೊತೆಗೆ ಬಸ್ಸು ನಿಲ್ದಾಣದ ಬಳಿಯಲ್ಲಿ ಜ್ಯೂಸ್ ಕುಡಿಯುತ್ತಿದ್ದ ಎನ್ನಲಾಗಿದ್ದು, ಈ ಸಂದರ್ಭ ಸುಮಾರು 15 ಮಂದಿಯ ತಂಡ ಅಲ್ಲಿಗೆ ಆಗಮಿಸಿ ಆತನ ಹೆಸರು ಕೇಳಿ ಬಳಿಕ ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿದ ಕುರಿತು ವರದಿಯಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿ ಪುತ್ತೂರಿನ ಮರೀಲ್ ಕಾಡುಮನೆ ನಿವಾಸಿ ಕೆ. ಇಬ್ರಾಹಿಂ ಅವರ ಪುತ್ರ ಎನ್ನಲಾಗಿದೆ. ಇದೀಗ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕಸುನಿಲ್ ಕುಮಾರ್ ಹಾಗೂ ಉಪನಿರೀಕ್ಷಕ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ.





Comments